ಕಾಶ್ಮೀರಿ ಕಾವಾ – ಕಾಶ್ಮೀರದ ಜನಪ್ರಿಯ ಪಾನೀಯ

ಕಾಶ್ಮೀರಿ ಕಾವಾ

ಕಾಶ್ಮೀರಿ ಕಾವಾ ಇದೊಂದು ಸಿಹಿಯಾದ ಚಹಾ, ಇದನ್ನು ಕುಡಿದರೆ ಎಲ್ಲರೂ ಹೇಳುತ್ತಾರೆ ವಾಹ್ ವಾಹ್. ಕಾಶ್ಮೀರದಲ್ಲಿ Kah ಎಂದರೆ 11 ಎಂದು ಅರ್ಥ. ಇದು ಖಾಹ್ವ ಎಂಬ ಅರೇಬಿಕ್ ಪದದಿಂದ ಹುಟ್ಟಿಕೊಂಡಿದೆ. ಅಂದರೆ ಈ ಚಹಾದಲ್ಲಿ 11 ರೀತಿಯ ಮಸಾಲೆ ಪದಾರ್ಥಗಳು ಬೀಳುವುದರಿಂದ ಇದನ್ನುಕಾವಾ ಎನ್ನುತ್ತಾರೆ. ರಾಜಮಹಾರಾಜರ ಕಾಲದಿಂದಲೂ ಈ ಪಾನೀಯ ಬಳಕೆಯಲ್ಲಿದೆ. ಈಗಂತೂ ಕಾಶ್ಮೀರಕ್ಕೆ ಬರುವ ಅಥಿತಿಗಳಿಗೆ ಅಥವಾ ಯಾವುದೇ ಸಮಾರಂಭ ಇದ್ದಾಗ ಕೇಸರಿ ದಳಗಳನ್ನು ಹಾಕಿ ಕಾವಾ ಕುಡಿಸೋದು ಇಲ್ಲನ ಜನರ ಸಂಪ್ರದಾಯ. ಕೇವಲ ಕಶ್ಮೀರ ಮಾತ್ರವಲ್ಲದೆ, ಭಾರತದ ಕೆಲವು ರಾಜ್ಯಗಳು, ಪಾಕಿಸ್ತಾನ, ಇರಾನ್, ಅಫಘಾನಿಸ್ತಾನ ಹಾಗೂ ಮಧ್ಯ ಏಷ್ಯಾದ ಕೆಲವು ಪ್ರದೇಶಗಳಲ್ಲಿ ಕಾವಾವನ್ನು ವ್ಯಾಪಕವಾಗಿ ಸೇವಿಸುತ್ತಾರೆ.

ಕಾಶ್ಮೀರಿ ಕಾವಾ ತಯಾರಿಸುವ ವಿಧಾನ:

ಕಾಶ್ಮೀರಿ ಕಾವಾ
ಕಾವಾ ತಯಾರಿಸುವ ಹೂಜಿ “ಸಮೋವರ್”

ಕಾವಾವನ್ನು “ಸಮೋವರ್” ಎಂದು ಕರೆಯಲ್ಪಡುವ ತಾಮ್ರದ ಹೂಜಿಯಲ್ಲಿ ತಯಾರಿಸುತ್ತಾರೆ. ಇದರ ಮಧ್ಯದಲ್ಲಿ ಒಂದು ಕೊಳವೆ ತರ ಇದ್ದು ಅದರಲ್ಲಿ ಇದ್ದಿಲನ್ನು ಹಾಕಿರುತ್ತಾರೆ. ಅದರ ಸುತ್ತಲೂ ನೀರು ಕುದಿಯಲು ಜಾಗವಿದ್ದು, ಚಹಾ ಎಲೆಗಳು ಮತ್ತು ಇತರ ಪದಾರ್ಥಗಳನ್ನು ನೀರಿನೊಂದಿಗೆ ಬೆರೆಸಲಾಗುತ್ತದೆ. ಕಾವಾ ಚಾಹಾಗೆ ನೀರಿನ ಜೊತೆ ಕೇಸರಿ, ಲವಂಗ , ಏಲಕ್ಕಿ, ದಾಲ್ಚಿನ್ನಿಯಂತಹ ಗರಂ ಮಸಾಲೆಗಳು , ಚಹಾದ ಹಸಿರು ಎಲೆಗಳನ್ನು ಸೇರಿಸಿ ಕುದಿಸುತ್ತಾರೆ. ನಂತರ ಸಾಮಾನ್ಯವಾಗಿ ಸಕ್ಕರೆ ಅಥವಾ ಜೇನುತುಪ್ಪ ಮತ್ತು ಪುಡಿಮಾಡಿದ ಬಾದಾಮಿ ಚೂರುಗಳನ್ನು ಅಥವಾ ಗುಲಾಬಿಯ ದಳಗಳನ್ನು ಬೆರೆಸಿ ಕೊಡುತ್ತಾರೆ.

ಕಾಶ್ಮೀರಿ ಕಾವಾ ದ ವಿವಿಧ ಪ್ರಕಾರಗಳು:

ಕಾವಾ ಚಹಾದಲ್ಲಿ ವಿವಿಧ ಪ್ರಕಾರಗಳಿವೆ.

  • ಕ್ಲಾಸಿಕ್ ಕಾವಾ: ಇದನ್ನು ಸಾಂಪ್ರದಾಯಿಕ ಹಬ್ಬ, ಮದುವೆ ಮತ್ತು ಗೆಟ್-ಟುಗೆದರ್ ಅಲ್ಲಿ ಶೀರ್ಮಾಲ್ ಎಂಬ ಸ್ಥಳೀಯ ಗರಿಗರಿಯಾದ ಬ್ರೆಡ್ ನೊಂದಿಗೆ ಕೊಡುತ್ತಾರೆ. ಶೀರ್ಮಾಲ್ ನ್ನು ಈ ಕಾವಾ ಚಹಾದಲ್ಲಿ ಅದ್ದು ತಿಂದರೆ ರುಚಿ ದುಪ್ಪಟ್ಟಾಗುತ್ತದೆ.
  • ಮಿಲ್ಕ್ ಕಾವಾ: ಇದನ್ನು ಈದ್ ಅಂತಹ ಹಬ್ಬಗಳಲ್ಲಿ, ಕಾಶ್ಮೀರಿ ಮದುವೆಗಳಲ್ಲಿ ಕೊಡುತ್ತಾರೆ. ಹಾಗೆಯೇ ಇದನ್ನು ಸ್ಥಳೀಯವಾಗಿ ತಯಾರಿಸಿದ ಸಿಹಿ ಬಿಸ್ಕೆಟ್ಸ್ ನೊಂದಿಗೆ ನೀಡಲಾಗುತ್ತದೆ. ಸಂಪೂರ್ಣ ಕಾಶ್ಮೀರಿ ಮಸಾಲೆಗಳ ಸುಹಾಸನೆಗಳನ್ನು  ಆಕಳ ಹಾಲು ಮತ್ತು ನೀರಿನ ಮಿಶ್ರಣಕ್ಕೆ ಸೇರಿಸುವ ಮೂಲಕ ಇದನ್ನು ತಯಾರಿಸುತ್ತಾರೆ.
  •  ಶಾಂಗ್ರಿ ಕಾವಾ: ಇದನ್ನು ಶಾಂಗರ್ ಎಂದು ಕೂಡಾ ಕರೆಯುತ್ತಾರೆ. ಲಿಕ್ಕೋ ರೈಸ್ ಅಂದರೆ ಜೇಷ್ಠ ಮಧುವನ್ನು ಈ ಖಾವಾದಲ್ಲಿ ಬೆರೆಸಿ  ನೋಯುತ್ತಿರುವ ಗಂಟಲು, ನೆಗಡಿ ಶೀತಕ್ಕೆ ಹಳೆಯ ಔಷಧಿಯಾಗಿ ಬಳಸುತ್ತಾರೆ.

ಕಾವಾದ ಪ್ರಯೋಜನಗಳು:

  • ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ
  • ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
  • ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ
  • ದೇಹದ ಕೊಬ್ಬನ್ನು ಕರಗಿಸಲು ಸಹಕರಿಸುತ್ತದೆ
  • ಶೀತಕ್ಕೆ ಸಂಪೂರ್ಣ ಪರಿಹಾರ ಕೊಡುತ್ತದೆ

ಕಾವಾ ಎಲ್ಲಿ ದೊರೆಯುತ್ತದೆ?

ಇನ್ಸ್ಟಂಟ್ ಕಾವಾ ಮಿಕ್ಸ್

ಕಾಶ್ಮೀರದ ಯಾವುದೇ ಭಾಗದ ಅಂಗಡಿಗಳಲ್ಲಿ ಅಥವಾ ಕಿರಾಣಿ ಅಂಗಡಿಗಳಲ್ಲಿ ಕಾವಾ ಸುಲಭವಾಗಿ ಲಭ್ಯವಿದೆ. ಕಾಶ್ಮೀರಕ್ಕೆ ನಮ್ಮ ಭೇಟಿಯ ಸಮಯದಲ್ಲಿ ನಾವು ಅದನ್ನು ಲೆಥ್‌ಪೋರಾ ಪಂಪೋರ್‌ ನಲ್ಲಿರುವ “ಕಿಸ್ಸಾನ್ ಕೇಸರ್ ಮಹಲ್” ಹೆಸರಿನ ಅಂಗಡಿಯಲ್ಲಿ ಖರೀದಿಸಿದೆವು. ಅವರು ಭಾರತದಾದ್ಯಂತ ವಿತರಣೆಯನ್ನು ಹೊಂದಿದ್ದಾರೆ. ನೀವು ಅದನ್ನು ಖರೀದಿಸಲು ಬಯಸಿದರೆ, ನೀವು ನೀಡಿದ ಸಂಖ್ಯೆಗೆ ಸಂಪರ್ಕಿಸಬಹುದು.

ನಾವು ಮೊದಲ ಬಾರಿಗೆ ಕಾವಾವನ್ನು ಸೇವಿಸಿದಾಗ, ಏಲಕ್ಕಿ ಮತ್ತು ಕೇಸರಿಗಳ ಸುವಾಸನೆ ಮತ್ತು ಪ್ರತಿ ಗುಟುಕಿನಲ್ಲಿ ಬಾಯಿಗೆ ಹೊಡೆಯುವ ಬಾದಾಮಿ ತುಂಡುಗಳು ನಮ್ಮನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯಿತು. ಅಲ್ಲಿ ನಾವು ಕನಿಷ್ಠ 2-3 ಕಪ್ ಕುಡಿದು ಅವರು ಮಾರುವ ಕಹ್ವಾ ಪುಡಿಯನ್ನು ಮನೆಗೆ ತೆಗೆದುಕೊಂಡು ಹೋದೆವು.

ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ:

1 Trackback / Pingback

  1. ಆಗ್ರಾ ಪೇಠಾ - 350 ವರ್ಷಗಳಷ್ಟು ಹಳೆಯದಾದ ಮೊಘಲ್ ವಿಶೇಷ ಖಾದ್ಯ - Mr and Mrs Kamath

Leave a Reply

Your email address will not be published.


*