ಮಿಸ್ಟರ್ ಆಂಡ್ ಮಿಸೆಸ್ ಕಾಮತ್ – ನಮ್ಮ ಬಗ್ಗೆ

ಮಿಸ್ಟರ್ ಆಂಡ್ ಮಿಸೆಸ್ ಕಾಮತ್
ಮಿಸ್ಟರ್ ಆಂಡ್ ಮಿಸೆಸ್ ಕಾಮತ್

ನಮಸ್ಕಾರ ಎಲ್ಲರಿಗೂ,
ನನ್ನ ಹೆಸರು ಸ್ನೇಹಾ ಕಾಮತ್, ನನ್ನ ಗಂಡನ ಹೆಸರು ರಿತೇಶ್ ಕಾಮತ್. ಆದರೆ ಏನ್ ಗೊತ್ತಾ? ನಮ್ಮನ್ನ ಜನ ಪ್ರೀತಿಯಿಂದ ಮಿಸ್ಟರ್ ಆಂಡ್ ಮಿಸೆಸ್ ಕಾಮತ್ ಅಂತ ಕರೆಯುತ್ತಾರೆ, ಗುರುತಿಸುತ್ತಾರೆ ಕೂಡ. ಈ ರೀತಿ ಹೆಸರು ಬರೋಕೆ ಒಂದು ಮುಖ್ಯವಾದ ಕಾರಣ ಇದೆ. ಅದನ್ನು ಕೂಡಾ ಹೇಳ್ತೀನಿ ನಾನು ನಿಮಗೆ.

ನಾನು ಹುಟ್ಟಿ ಬೆಳೆದಿದ್ದು ಹೊನ್ನಾವರದ ಒಂದು ಪುಟ್ಟ ಊರು ಹೊಸಾಕುಳಿಯಲ್ಲಿ. ನಂತರ ರಿತೇಶ್ ಅವರ ಜೊತೆ (ಅವರನ್ನು ನಾನು ಪ್ರೀತಿಯಿಂದ ರೀತು ಅಂತ ಕರೀತೀನಿ) ಮದುವೆ ಆಗಿ ಕುಂದಾಪುರಕ್ಕೆ ಬಂದೆ. ಇಲ್ಲಿ ನಮ್ಮದೇ ಸ್ವಂತ ಕೋಚಿಂಗ್ ಸೆಂಟರ್ ಕೂಡಾ ಇದೆ. ಸರಸ್ವತಿ ಕೋಚಿಂಗ್ ಸೆಂಟರ್ ಅಂತ ಅದರ ಹೆಸರು. ತುಂಬಾ ಚೆನ್ನಾಗಿ ಕ್ಲಾಸ್ ನಡೀತಾ ಇತ್ತು. ತುಂಬಾ ವಿಧ್ಯಾರ್ಥಿಗಳು ಬರ್ತಾ ಇದ್ರು. ರೀತು ಕಾಲೇಜು ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಈ ಮೂರೂ ವಿಷಯವನ್ನು ಕೂಡಾ ಕಲಿಸ್ತಾ ಇದ್ರು.

ವಿದ್ಯಾರ್ಥಿಗಳಿಗೆ ಪರಿಕ್ಷೆ ಇದ್ದಾಗ ನಮಗೆ ರಜೆ ಇರ್ತಿತ್ತು. ಆ ಸಮಯದಲ್ಲಿ ನಾವು ಸುತ್ತಾಡೋಕೆ ತುಂಬಾ ಕಡೆ ಹೋಗ್ತಾ ಇದ್ವಿ. ಒಂದು ದಿನ ಹೀಗೆ ಅನಿಸ್ತು, ನಾವು ತುಂಬಾ ಸುತ್ತಾಡ್ತಿವಿ, ಒಳ್ಳೊಳ್ಳೆ ಜಾಗಗಳನ್ನು ನೋಡ್ತೀವಿ. ಇವೆಲ್ಲವನ್ನೂ ನಮಗೋಸ್ಕರ ಒಂದು ಸಾಕ್ಷ್ಯಚಿತ್ರ ಮಾಡಿಟ್ಟುಕೊಳ್ಳಬೇಕು. ಈ ಒಳ್ಳೆ ನೆನಪುಗಳನ್ನು ಮುಂದೊಂದು ದಿನ ನಾವು ನೋಡಿ ಖುಷಿ ಪಡ್ತಿವಿ ಅಂತ ಅಂದುಕೊಂಡ್ವಿ.

ಅದಕ್ಕೆ ಅಂತಾನೆ 2018 ಏಪ್ರಿಲ್ 24ಕ್ಕೆ ನಮ್ಮದೇ ಆದ YouTube ಚಾನೆಲ್ “Mr & Mrs Kamath” ಪ್ರಾರಂಭ ಮಾಡಿದ್ವಿ. ಅದರಲ್ಲಿ ನಾವು ಹೋಗೋ ಜಾಗಗಳನ್ನು, ಅದರ ಮಾಹಿತಿಗಳನ್ನು ಜನರಿಗೆ ತಿಳಿಸಿ ಕೊಡಬೇಕು ಅಂತ ನಮ್ಗೆ ರಜೆ ಸಿಕ್ಕಾಗಲೆಲ್ಲಾ ಕ್ಯಾಮೆರಾ ಹಿಡ್ಕೊಂಡು ವಿಡಿಯೋ ಮಾಡ್ತಾ ಇದ್ವಿ.

ಆದರೆ ಇದೇ ಮುಂದೊಂದು ದಿನ ನಮ್ಮ ವೃತ್ತಿ ಆಗಿ ಬದಲಾಗುತ್ತೆ ಅಂತ ಅಂದುಕೊಂಡಿರಲಿಲ್ಲ. Lockdown ಸಮಯದಲ್ಲಿ ಕೋಚಿಂಗ್ ಕ್ಲಾಸ್ ತೆರೆಯೋದಕ್ಕೆ ಅಪ್ಪಣೆ ಸಿಗಲಿಲ್ಲ. ಹೊರಗೆ ಸುತ್ತಾಡೋಕು ಆಗ್ತಾ ಇರಲಿಲ್ಲ. ಆ ಸಮಯದಲ್ಲಿ ಮನೇಲೇ ಕೂತು ಒಳ್ಳೆಯ ಮಾಹಿತಿಗಳನ್ನು ವಿಡಿಯೋ ಮೂಲಕ ಕೊಡುವ ಚಿಕ್ಕ ಪ್ರಯತ್ನವನ್ನು ಮಾಡಿದ್ವಿ.

ನಮ್ಮ YouTube ವಾಹಿನಿಯಲ್ಲಿ ನನ್ನ ಮತ್ತು ನನ್ನ ಗಂಡನ ಮುದ್ದಾದ ಹಾಸ್ಯಭರಿತ ಮಾತುಗಳು, ನಮ್ಮ ಜೀವನ ಶೈಲಿ, ಸೌಂದರ್ಯ ಮತ್ತು ಆರೋಗ್ಯ , ಹಾಗೂ ಶಿಕ್ಷಣಕ್ಕೆ ಸಂಬಂಧಪಟ್ಟ ಮಾಹಿತಿ, ಟ್ರಾವೆಲ್ ವಿಲೋಗ್ಸ್ ಇವೆಲ್ಲವೂ ಜನರಿಗೆ ಇಷ್ಟವಾಗಿ ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಿದರು. ಪ್ರವೃತ್ತಿಯಿಂದ ಆರಂಭವಾದ ಈ ನಮ್ಮ YouTube ವಾಹಿನಿ ಇಂದು ಇದೇ ನಮ್ಮ ವೃತ್ತಿ ಆಗಿದೆ.

ಒಂದು ಚಾನೆಲ್ ಇಂದ ಶುರುವಾದ ನಮ್ಮ ಈ YouTube ಪ್ರಯಾಣ ಇಂದು

  • ಸಾಂಪ್ರದಾಯಿಕ ಅಡುಗೆ ಹಾಗೂ ಹೋಟೆಲ್ ನಲ್ಲಿ ತಯಾರಿಸುವ ಆಹಾರದ ವಿವರಣೆಗೆ Mr & Mrs Kamath Food Vlogs
  • ಪ್ರಸಿದ್ಧವಾದ ಪ್ರದೇಶಗಳನ್ನು, ಕ್ಷೇತ್ರಗಳನ್ನೂ ತೋರಿಸುವ ಸಲುವಾಗಿ MMK Travel Vlogs
  • ವಿಧ್ಯಾರ್ಥಿ ಗಳಿಗೆ ಸಹಾಯವಾಗಲು JEE Kannada
  • ಫೇಸ್ಬುಕ್ ಪೇಜ್ Mr & Mrs Kamath
  • ಇನ್ಸ್ಟಾಗ್ರಾಮ್ ಪೇಜ್ Mr & Mrs Kamath
  • ಟ್ರಾವೆಲ್ ವೆಬ್ಸೈಟ್ (ಇಂಗ್ಲಿಷ್) TravelwithKamath
  • ಟ್ರಾವೆಲ್ ವೆಬ್ಸೈಟ್ (ಕನ್ನಡ) MrandmrsKamath

ಇಷ್ಟೆಲ್ಲ ದೊಡ್ಡದಾಗಿ ಬೆಳೆದು ನಿಂತಿದೆ. ಇದೇ ರೀತಿ ನಿಮ್ಮ ಪ್ರೀತಿ, ಆಶೀರ್ವಾದ, ಬೆಂಬಲ ಯಾವತ್ತೂ ನಮ್ಮ ಮೇಲೆ ಹೀಗೆ ಇರಲಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇವೆ.